H

Harish K S's Vinuthana

A platform to understand the true values of relationship and
how to safeguard the present relationship

  • Rated2.0/ 5
  • Updated 5 Years Ago

ವಿನೂತನ: ಜೀವನದ 7 ಅದ್ಭುತಗಳು - ಅಮೂಲ್ಯವಾದದ್ದು.

Updated 6 Years Ago

ವಿನೂತನ: ಜೀವನದ 7 ಅದ್ಭುತಗಳು - ಅಮೂಲ್ಯವಾದದ್ದು.
ನಾವು ಯಾವಾಗಲು ನಮ್ಮಲ್ಲಿ ಅದು ಇಲ್ಲ, ಇದು ಇಲ್ಲ ಅಂತ ಹೆಚ್ಹು ಕೊರಗೋದೇ ಆಗಿರುತ್ತದೆ. ನಾವುಗಳು ನಮ್ಮಲ್ಲಿ ಇರುವುದನ್ನು ಬಿಟ್ಟು, ಇಲ್ಲದಿರುವುದನ್ನು ಹೆಚ್ಚಾಗಿ ಹುಡುಕಲು ಮುಂದಾಗುತ್ತೇವೆ. ಅದರ ಪರಿಣಾಮ, ಇರುವುದನ್ನು ಸರಿಯಾಗಿ ಉಪಯೋಗಿಸಿಕೊಳ್ಳಲೂ ಆಗದೆ, ಹುಡುಕಲು ಹೊರಟು, ಅದನ್ನೂ ಧಕ್ಕಿಸಿಕೊಳ್ಳಲ್ಲೂ ಆಗದೆ ಕೊನೆಗೆ ತ್ರಿಶಂಕು ಸ್ಥಿತಿಗೆ ಬಂದು ನಿಲ್ಲುತ್ತೇವೆ. ಕೊನೆಗೆ ಎಲ್ಲಾ ಪ್ರಯತ್ನ ವ್ಯರ್ಥವಾದ ಬಳಿಕ ನಮಗೆ ಅರ್ಥವಾಗೋದು ಒಂದೇ. ಯಾಕಾದರೂ ಸುಮ್ಮನೆ ನನ್ನ ಸಾಮರ್ಥ್ಯ ವ್ಯರ್ಥ ಮಾಡಿಕೊಂಡೆ ಅನ್ನೋದು. ಈ ಪರಿಸ್ತಿತಿ ನಮ್ಮೆಲ್ಲರಿಗೂ ಒಂದಲ್ಲಾ, ಒಂದು ರೀತಿಯಲ್ಲೂ ಆಗಿರುವ ಅನುಭವವೇ. ಇದಕ್ಕೆ ಸರಿ ಹೊಂದುವ, ಒಂದು ಚಿಕ್ಕ ನೀತಿ ಕಥೆ ಇಲ್ಲಿದೆ. ಓದಿ, ತಿಳಿದುಕೊಳ್ಳಿ, ಇತರರಿಗೂ ತಿಳಿಸಿ ಹೇಳಿ. ಪೂಜಾ ಒಂದು ಚಿಕ್ಕ ಹಳ್ಳಿಯ ಹುಡುಗಿ. ಅವಳಿಗೆ ಈಗ 9 ವರ್ಷಗಳು. ಪೂಜಾ ತನ್ನ ಹಳ್ಳಿಯಲ್ಲೇ 4ನೇ ತರಗತಿವರೆಗೂ ಪ್ರಾಥಮಿಕ ಶಾಲೆಯಲ್ಲಿ ವ್ಯಾಸಂಗ ಮಾಡಿದ್ದಳು. 5ನೇ ತರಗತಿಗೆ ಹತ್ತಿರದ ನಗರದ ಒಂದು ಶಾಲೆಯಲ್ಲಿ ಪ್ರವೇಶ ಸಿಕ್ಕಿತು. ತನ್ನನ್ನು ನಗರದ ಶಾಲೆಯಲ್ಲಿ ಸೇರಿಸಿಕೊಂಡಿರುವುದಕ್ಕೆ ಪೂಜಾಳಿಗೆ ಏನೋ ಖುಷಿ. ಅಂದು ಅವಳ ಶಾಲೆಗೆ ಮೊದಲನೇ ದಿನ. ತನ್ನ ಶಾಲೆಯ ವಾಹನ ಬಂದು ತನ್ನನ್ನು ಕರೆದುಕೊಂಡು ಹೋಗುವುದು ಅನ್ನೋ ಅತೀವ ಸಂತೋಷ ಅವಳಿಗೆ. ಸ್ಕೂಲ್ ಬಸ್ ಬಂದಾಗ ಬೇಗನೆ ಹತ್ತಿ ಕೂತುಕೊಂಡಳು. ಅವಳಿಗೇ ತಿಳಿಯದ ಸಂತೋಷ ಅವಳಲ್ಲಿತ್ತು. ಬಸ್ ತನ್ನ ಶಾಲೆಗೆ ತಲುಪಿದ ಮೇಲೆ, ಎಲ್ಲಾ ವಿಧ್ಯಾರ್ಥಿಗಳು ತಮ್ಮ ತಮ್ಮ ತರಗತಿಗೆ ಹೋಗಲಾರಂಭಿಸಿದರು. ಪೂಜಾ ಕೂಡ ಬೇರೆ ವಿಧ್ಯಾರ್ಥಿಗಳ ನೆರವಿನಿಂದ ತನ್ನ ತರಗತಿಗೆ ಹೋದಳು. ಅವಳ ಸರಳ ಉಡುಪು ನೋಡಿದ ಇತರೆ ವಿಧ್ಯಾರ್ಥಿಗಳಿಗೆ ಅವಳೊಬ್ಬ ಹಳ್ಳಿ ಹುಡುಗಿ ಎಂದು ತಿಳಿದು ಹೋಯ್ತು. ಹಾಗಾಗಿ ಇತರೆ ವಿಧ್ಯಾರ್ಥಿಗಳು ಅವಳನ್ನು ಗೇಲಿ ಮಾಡಲಾರಂಭಿಸಿದರು. ಅದೇ ಸಮಯಕ್ಕೆ ಟೀಚರ್ ಬಂದು, ಎಲ್ಲರನ್ನು ಸುಮ್ಮನಿರುವಂತೆ ಕೇಳುತ್ತಾರೆ. ನಂತರ ಪೂಜಳನ್ನು ತರಗತಿಯ ಎಲ್ಲಾ ವಿಧ್ಯಾರ್ಥಿಗಳಿಗೆ ಪರಿಚಯ ಮಾಡಿಸಿ, ಇವತ್ತಿನಿಂದ ಪೂಜಾ ನಿಮ್ಮೆಲ್ಲರ ಜೊತೆಗೆ ವ್ಯಾಸಂಗ ಮಾಡುತ್ತಾಳೆ ಅಂತ ತಿಳಿಸಿಕೊಡುತ್ತಾರೆ. ನಂತರ ಟೀಚರ್, ಮಕ್ಕಳಿಗೆ ಒಂದು ಪರೀಕ್ಷೆಗೆ ಸಿದ್ದರಾಗಲು ತಿಳಿಸುತ್ತಾರೆ. ಪ್ರಪಂಚದ 7 ಅದ್ಭುತಗಳನ್ನು ಬರೆಯಲು ಹೇಳುತ್ತಾರೆ. ಎಲ್ಲಾ ಮಕ್ಕಳು ಬೇಗ ಬೇಗನೆ ಉತ್ತರಗಳನ್ನು ಬರೆಯಲು ಮುಂದಾಗುತ್ತಾರೆ. ಪೂಜಾ ಮಾತ್ರ ನಿಧಾನವಾಗಿ ಉತ್ತರ ಬರೆಯಲು ಪ್ರಾರಂಭಿಸುತ್ತಾಳೆ. ಪೂಜಾ ಹೊರತು ಪಡಿಸಿ, ಉಳಿದೆಲ್ಲಾ ಮಕ್ಕಳು ತಮ್ಮ ಉತ್ತರಗಳನ್ನು ಟೀಚರ್ ಗೆ ಸಲ್ಲಿಸಿದರು. ಆಗ ಟೀಚರ್ ಪೂಜಾಳ ಹತ್ತಿರ ಬಂದು, ‘’ಏನಾಯಿತು ಪುಟ್ಟಿ, ಉತ್ತರ ಬರೆದಾಯ್ತಾ..? ಚಿಂತಿಸಬೇಡ, ನಿಧಾನವಾಗಿ ಬರೆದು ಕೊಡು. ಇವರೆಲ್ಲಾ 2 ದಿನಗಳ ಹಿಂದೆಯಷ್ಟೇ ಇದನ್ನು ಕಲಿತ್ತಿದ್ದು. ಆದರೆ ನಿನಗೆ ತಿಳಿದಿರೋದು ಬರೆದುಕೊಡು.’’ ಅಂತ ಹೇಳಿ ಸಮಾಧಾನ ಮಾಡುತ್ತಾರೆ. ಪೂಜಾ ಉತ್ತರಿಸುತ್ತಾ, ‘’ಟೀಚರ್, ಅನೇಕ ವಿಷಯಗಳಿವೆ, ಆದರೆ ಅದರಲ್ಲಿ ಬರೀ 7 ಮಾತ್ರ ಆಯ್ಕೆ ಮಾಡೋದು ಹೇಗೆ ಅಂತ ಚಿಂತಿಸುತ್ತಾ ಇದ್ದೀನಿ..’’ ಅಂತ ಹೇಳುತ್ತಾಳೆ. ಟೀಚರ್ ಮತ್ತೆ ಅವಳಿಗೆ ‘’ನಿನಗೆ ತಿಳಿದಿದ್ದನ್ನು ಬರೆದು ಕೊಡು.’’ ಅಂತ ಹೇಳಿ, ಬೇರೆ ವಿಧ್ಯಾರ್ಥಿಗಳ ಉತ್ತರಗಳನ್ನು ಓದಲು ಮುಂದಾಗುತ್ತಾರೆ. ಬಹುಪಾಲು ಮಕ್ಕಳು ಗ್ರೇಟ್ ವಾಲ್ ಆಫ್ ಚೀನಾ, ಕೊಲೋಸಿಯಮ್, ಸ್ಟೋನ್ಹೆಡ್ಜ್, ಗಿಜಾದ ಗ್ರೇಟ್ ಪಿರಮಿಡ್, ಪಿಸಾದ ಲೀನಿಂಗ್ ಗೋಪುರ, ತಾಜ್ಮಹಲ್, ಬ್ಯಾಬಿಲೋನ್ ನ ಹ್ಯಾಂಗಿಂಗ್ ಗಾರ್ಡನ್ಸ್ ಮೊದಲಾದವುಗಳನ್ನು ಸರಿಯಾಗಿ ಉತ್ತರಿಸಿದರು. ತರಗತಿಯ ಎಲ್ಲಾ ಮಕ್ಕಳು ತಾವು ಕಲಿತಿದ್ದನ್ನು ನೆನಪಿಸಿಕೊಂಡು ಉತ್ತರಿಸಿದ್ದಕ್ಕಾಗಿ ಟೀಚರ್ ಗೆ ತುಂಬಾ ಖುಷಿಯಾಗುತ್ತದೆ. ಕೊನೆಗೆ ಪೂಜಾಳ ಉತ್ತರದ ಕಾಗದವನ್ನು ಎತ್ತಿಕೊಂಡು ಓದುವುದಕ್ಕೆ ಮುಂದಾಗುತ್ತಾರೆ. ‘’7 ಅದ್ಭುತಗಳು – ನೋಡುವುದು, ಕೇಳುವುದು, ಸ್ಪರ್ಶಿಸುವುದು, ನಗುವುದು, ಯೋಚಿಸುವುದು, ಸೌಜನ್ಯದಿಂದ ನಡೆದುಕೊಳ್ಳುವುದು, ಇತರರನ್ನು ಪ್ರೀತಿಸುವುದು.!!!!’’ ಉತ್ತರ ಓದಿದ ಟೀಚರ್ ಧಿಗ್ಬ್ರಮೆಯಿಂದ ನೋಡುತ್ತಾರೆ. ಒಂದು ಚಿಕ್ಕ ಹಳ್ಳಿಯ ಹುಡುಗಿ, ದೇವರು ನಮಗೆ ಕೊಟ್ಟಿರುವ ಅಮೂಲ್ಯ ಉಡುಗೊರೆಗಳನ್ನು ನೆನಪಿಸಿದ್ದು, ನಿಜವಾಗಿಯೂ ಅದ್ಭುತ ಅಂತ ಹೇಳುತ್ತಾ ಪೂಜಾಳಿಗೆ ಬೆನ್ನು ತಟ್ಟಿ ಪ್ರಶಂಸಿಸುತ್ತಾರೆ. ನೈತಿಕತೆ: ನಿಮ್ಮಲ್ಲಿರುವ ಚಾತುರ್ಯತೆ ಗೌರವಿಸಿ, ನಿಮ್ಮಲ್ಲಿರುವ ಸಂಪನ್ಮೂಲಗಳು ಉಪಯೋಗಿಸಿಕೊಳ್ಳಿ, ಸ್ಫೂರ್ತಿಯನ್ನು ಕಂಡುಕೊಳ್ಳಲು ನೀವು ಯಾವಾಗಲೂ ದೂರ ಕಾಣಬೇಕಿಲ್ಲ. ನಿಮ್ಮ ಗುರಿಗಳನ್ನು ತಲುಪಲು ದೇವರು ನಿಮಗೆ ಎಲ್ಲಾ ಶಕ್ತಿಯನ್ನು ಕೊಟ್ಟಿದ್ದಾನೆ. Vinuthana – Inspirational Stories in Kannada; Moral Stories in Kannada; Inspirational Quotes in Kannada; Funny Quotes in Kannada; News in Kannada; Stories in Kannada; Karnataka History in Kannada; Movie News in Kannada, Sports News in Kannada; Life Coach in Kannada; Relationship Stories in Kannada; Life Stories in Kannada; Bangalore Stories in Kannada; Karnataka Culture in Kannada Language; World News in Kannada; Website for Kannada; Online Kannada Portal for all News; Online Kannada Stories; ಓಡಿ, ನಿಮ್ಮ , ಆಗತ್ತೆ, ಅಂದ್ರೆ, ಕಡಿಮೆ, ಕನ್ನಡ, ನಮ್ಮ, ನಾವು, ನಿಮ್ಮ, ಮಗು, ಮೇಲೆ, ಶಕ್ತಿ, ಹಾಗೆ, ಹೆಚ್ಚು,
Read More