H

Harish K S's Vinuthana

A platform to understand the true values of relationship and
how to safeguard the present relationship

  • Rated2.0/ 5
  • Updated 5 Years Ago

ವಿನೂತನ: ಅಂದುಕೊಂಡ ಹಾಗೆ ಅಚ್ಚೆ ದಿನ್ ಬಂದಾಗ..

Updated 5 Years Ago

ವಿನೂತನ: ಅಂದುಕೊಂಡ ಹಾಗೆ ಅಚ್ಚೆ ದಿನ್ ಬಂದಾಗ..
ಎಲ್ಲರಿಗೂ 50 ಲಕ್ಷ ಹಣ ಬಂದಿರೋದನ್ನು ನೋಡಿ, ಅವರ ಖುಷಿಯನ್ನು ನೋಡಿ, ನನ್ನ ಖುಷಿ ಕೂಡ ಹೆಚ್ಚಾಯಿತು. ಇದೆ ಖುಷಿಯಲ್ಲಿ ಮನೆಗೆ ಬೇಕಾದ ಎಲ್ಲಾ ಥರದ ವಸ್ತುಗಳನ್ನು ಖರೀದಿಸುವ ಯೋಚನೆ ಬಂತು. ನಂತರ ಮನೆಗೆ ಬೇಕಾದಷ್ಟು ವಸ್ತುಗಳನ್ನು ತೆಗೆದುಕೊಂಡು ಬರುತ್ತೇನೆ ಎಂದು ಹೇಳಿ ಅಂಗಡಿಗೆ ಹೊರಟೆ. Vinuthana - Olle Dinagalu ಸ್ನೇಹಿತರೇ, ನಾವು ದಿನ ನಿತ್ಯ ಎಷ್ಟೋ ವಿಷಯಗಳ ಬಗ್ಗೆ ಮಾತಾಡುತ್ತೇವೆ, ಯೋಚಿಸುತ್ತೇವೆ, ಹಾಗೆ ಆದರೆ ಒಳ್ಳೇದು, ಹೀಗೆ ಆದರೆ ಒಳ್ಳೇದು ಅನ್ನೋ ಎಷ್ಟೋ ವಿಚಾರಗಳು ಬಂದು ಹೋಗುತ್ತವೆ. ಅದರಲ್ಲಿ ಕೆಲವು ಹಾಸ್ಯಕ್ಕೆ ಅಷ್ಟೇ ಸೀಮಿತ ಆದರೆ, ಇನ್ನು ಕೆಲವು ಯೋಚನೆಗೆ ಅಷ್ಟೇ ಸೀಮಿತ. ಎಲ್ಲೋ ನೂರರಲ್ಲಿ ಒಂದೋ ಎರಡೋ ಮಾತ್ರ ಕಾರ್ಯಗತವಾಗೋ ವಿಚಾರಗಳು ಆಗಿರುತ್ತವೆ. ಇಂತಹ ಒಂದು ವಿಚಾರ ಇಡೀ ದೇಶವನ್ನೇ ಯೋಚನೆ/ ಕಲ್ಪನೆಯಲ್ಲಿ ತೆಲಾಡಿಸಿದ ವಿಷಯ ಅಂದರೆ, ಅದು ವಿದೇಶದಲ್ಲಿ ಇರಿವ ಕಪ್ಪು-ಹಣ ಬಂದರೆ ಎಲ್ಲರ ಬ್ಯಾಂಕ್ ಖಾತೆಗೆ ಇಂತಿಷ್ಟು ಹಣ ಬಂದುಬಿಡುತ್ತದೆ ಅನ್ನೋದು. ಈ ವಿಷಯದ ಬಗ್ಗೆ ಎಲ್ಲಾರು ಯೋಚನೆ-ಕಲ್ಪನೆಯಲ್ಲಿ ತೊಡಗಿಕೊಂಡಿರುವಾಗಲೇ, ಹಾಗೆಯೇ ಆದರೆ ಮುಂದೆ ಏನಾಗಬಹುದೆಂದು ಒಂದು ಚಿಕ್ಕ ಕಲ್ಪನೆಯನ್ನು ಇಲ್ಲಿದೆ ನೋಡಿ. ಕಲ್ಪನೆ ಹೀಗಿದೆ: ನಿನ್ನೆ ರಾತ್ರಿ ಒಂದು ಕನಸು ಕಂಡೆ ಆ ಕನಸಿನಲ್ಲಿ ನಾನು ನನ್ನ ಮೊಬೈಲ್ ನಲ್ಲಿ ಒಂದು sms ಬಂದಿದ್ದನ್ನು ನೋಡಿದೆ ಅದು ಏನೆಂದರೆ ಭಾರತ ಸರ್ಕಾರವು ಐವತ್ತು ಲಕ್ಷ ರೂಪಾಯಿ ನನ್ನ ಜನಧನ ಯೋಜನೆಯ ಖಾತೆಯಲ್ಲಿ ಜಮೆ ಮಾಡಲಾಗಿತ್ತು. Vinuthana - Olle Dinagalu, Neeti Paatagalu ನಾನು ತುಂಬಾ ಖುಷಿಯಿಂದ ಕುಣಿಯುತ್ತ ಕೋಣೆಯಿಂದ ಹೊರಗಡೆ ಬಂದು ಎಲ್ಲರಿಗೂ ಹೇಳಿದೆ "ನೋಡಿ ನೋಡಿ ಒಳ್ಳೆಯ ದಿನಗಳು ಬಂದು ಬಿಟ್ಟಿತು ..ನನ್ನ ಖಾತೆಯಲ್ಲಿ 50ಲಕ್ಷ ಬಂದಿದೆ " ಅಂತ. ಅದಕ್ಕೆ ಮನೆಯವರು ಹೇಳಿದ್ರು, ಜಾಸ್ತಿ ಖುಷಿ ಪಡಬೇಡ ನಮ್ಮೆಲ್ಲರ ಖಾತೆಗೂ 50 ಲಕ್ಷ ಬಂದಿದೆ... ನೋಡು" ಎಂದರು ಖುಷಿ ಆಯ್ತು! ಹೋಗಿ ನನ್ನ ಸ್ನೇಹಿತರಿಗೂ ತಿಳಿಸಿದೆ! ಸ್ನೇಹಿತರು ಕೂಡ ಹೇಳಿದ್ರು "ಜಾಸ್ತಿ ಉಬ್ಬ ಬೇಡ, ನಮ್ಮ ಖಾತೆಗೂ 50 ಲಕ್ಷ ಬಂದಿದೆ .....'' ಅಂತ. ಎಲ್ಲರಿಗೂ 50 ಲಕ್ಷ ಹಣ ಬಂದಿರೋದನ್ನು ನೋಡಿ, ಅವರ ಖುಷಿಯನ್ನು ನೋಡಿ, ನನ್ನ ಖುಷಿ ಕೂಡ ಹೆಚ್ಚಾಯಿತು. ಇದೆ ಖುಷಿಯಲ್ಲಿ ಮನೆಗೆ ಬೇಕಾದ ಎಲ್ಲಾ ಥರದ ವಸ್ತುಗಳನ್ನು ಖರೀದಿಸುವ ಯೋಚನೆ ಬಂತು. ನಂತರ ಮನೆಗೆ ಬೇಕಾದಷ್ಟು ವಸ್ತುಗಳನ್ನು ತೆಗೆದುಕೊಂಡು ಬರುತ್ತೇನೆ ಎಂದು ಹೇಳಿ ಅಂಗಡಿಗೆ ಹೊರಟೆ. ಅಂಗಡಿ ಮುಚ್ಚಿತ್ತು! ''ಅಣ್ಣ ಈ ರಾಮು ಅಣ್ಣನ ಅಂಗಡಿ ಏಕೆ ಬಂದ್ ಆಗಿದೆ?'' ಎಂದು ಅಲ್ಲಿಯೇ ನಿಂತಿದ್ದ ವ್ಯಕ್ತಿಯನ್ನು ಕೇಳಿದೆ! ವ್ಯಕ್ತಿಹೇಳಿದ .. ''ಅಣ್ಣಾ ...ರಾಮು ಅಣ್ಣ ಅಂಗಡಿ ಬಂದ್ ಮಾಡಿ ಬಿಟ್ಟರು. ಅವರಿಗೆ ಈಗ ಅಂಗಡಿಯ ಅವಶ್ಯಕತೆಯಾದರೂ ಏಕಿದೆ ..?? ಅವರ ಖಾತೆಯಲ್ಲಿ ಅಂತು 50ಲಕ್ಷ ಬಂದಿದೆ. ಈಗ ಕೆಲಸ ಮಾಡಬೇಕಿಲ್ಲ ಅವರಿಗೆ!!!'' ಆ ವ್ಯಕ್ತಿಯ ಮಾತು ಕೇಳಿ, ಹೌದಲ್ವಾ ಅಂತ ಅನಿಸಿತು. ಈ ಅಂಗಡಿ ಮುಚಿದರೆ ಏನಾಯ್ತು, ಮಾಲ್ ಗೆ ಹೋಗಿ ತೆಗೆದು ಕೊಂಡು ಬರೋಣ ಅಂತ ಶಾಪಿಂಗ್ ಮಾಲ್ ಗೆ ಹೋದೆ. ಅಲ್ಲಿ ನೋಡಿದ್ರೆ ಎಲ್ಲ ಅಂಗಡಿಗಳು ಬಂದ್ ಇತ್ತು. ಕೇಳಿದಕ್ಕೆ ಎಲ್ಲಾರಿಗೂ 50 ಲಕ್ಷ ಸಿಕ್ಕಿದೆ. ಹಾಗಾಗಿ ಮಾಲ್ ನಲ್ಲಿ ಕೆಲಸ ಮಾಡಲು ಯಾರು ಕೂಡ ಬರುತ್ತಿಲ್ಲ ಅನ್ನೋ ಉತ್ತರ ಸಿಕ್ಕಿತು. ಸರಿ ಇನ್ನೇನು ಮಾಡೋದು, ಅಷ್ಟೊತ್ತಿಗೆ ಹೊಟ್ಟೆ ಯಾಕೋ ಚುರ್ ಅನ್ನಲ್ಲು ಶುರುವಾಯಿತು. ಸರಿ ಹೋಟೆಲ್ ಗೆ ಹೋಗಿ ಏನಾದರೂ ಇಷ್ಟವಾದದ್ದನ್ನು ತಿನ್ನೋಣ ಅಂತ ಹೋಟೆಲ್ ಕಡೆ ಹೆಜ್ಜೆ ಹಾಕಿದೆ. ಹೋಟೆಲ್ ಬಳಿಯೂ ಯಾರೂ ಕೂಡ ಇಲ್ಲ. ಸೆಕ್ಯೂರಿಟಿ ಗಾರ್ಡ್ ಸಹ ಇರಲಿಲ್ಲ! ಕಾರಣ ಅವನು ಸಹ ಶ್ರೀಮಂತನಾಗಿ ಬಿಟ್ಟಿದ್ದ ಅವನ ಬಳಿಯು ಸಹ 50 ಲಕ್ಷವಿತ್ತು!. Vinuthana - sreemanta, rich person ಸಂತೆಗೆ ಹೋದರೆ ಎಲ್ಲ ಗಾಡಿಯವರು, ಚಹಾ ಮಾರುವರು, ಜ್ಯೂಸ್, ಸೊಪ್ಪು ಮಾರುವವರು, ಎಲ್ಲರೂ ಕೆಲಸವನ್ನು ಬಿಟ್ಟು ಬ್ಯಾಂಕಿನ ಕಡೆ ಹೋಗಿದ್ದರು... ಹಣ ತರುವುದಕ್ಕೆ!!!!! ಏಕೆಂದರೆ ಯಾರಿಗೂ ಕೆಲಸ ಮಾಡುವ ಯಾವುದೇ ಅವಶ್ಯಕತೆಯು ಇಲ್ಲ. ಎಲ್ಲರ ಬಳಿ 50 ಲಕ್ಷ ಹಣ ಇತ್ತು. ನಗರದಿಂದ ಹೊರಗಡೆ ಹೋದರೆ ಎಲ್ಲ ಕಾರ್ಖಾನೆಗಳು ಬಂದ್ ಎಲ್ಲ ಕಾರ್ಮಿಕರಿಗೂ 50 ಲಕ್ಷ ಸಿಕ್ಕಿದೆ. ಎಲ್ಲರೂ ಕುಣಿದು ಕುಪ್ಪಳಿಸುತ್ತ ಹಾಡುತ್ತ ಇದ್ದರು -- ಒಳ್ಳೆಯ ದಿನಗಳು ಬಂತು ... ಒಳ್ಳೆಯ ದಿನಗಳು ಬಂತು ... ಎಂದು! ಸಂಜೆ ಹೊಲದ ಬಳಿ ಹೋದರೆ.. ಹೊಲದಲ್ಲಿ ಯಾರು ಇರಲಿಲ್ಲ!! ಎಲ್ಲಾ ರೈತರು ಹೊಲ ಬಿಟ್ಟು ಮನೆಯ ಕಡೆ ತೆರಳಿದ್ದರು.. ಈಗ ಅವರಿಗೆ ಮಳೆ ಬಿಸಿಲಿನಲ್ಲಿ ಕೆಲಸ ಮಾಡುವ ಯಾವುದೇ ಅವಶ್ಯಕತೆ ಇರಲಿಲ್ಲ, ಅವರು ಸಹ ಶ್ರೀಮಂತರು ಆಗಿಬಿಟ್ಟಿದ್ದರು. ಆಸ್ಪತ್ರೆಗೆ ಹೋಗಿ ನೋಡಿದೆ. ಅಲ್ಲಿ ಡಾಕ್ಟರ್ ಚೆಸ್ ಆಡುತ್ತಿದ್ದರು!!! ಕೇಳಿದಕ್ಕೆ "ನನಗೆ ಯಾವುದೇ ಚಿಕಿತ್ಸೆಯನ್ನು ಮಾಡಬೇಕಿಲ್ಲ. ಈಗ 50 ಲಕ್ಷ ಬೇಕಾದಷ್ಟು ಆಯ್ತು... ಜೀವನೋಪಯಕ್ಕೆ ....!! ಹೀಗೆ 5 ದಿನಗಳು ಕಳೆಯಿತು.......!!!! ಜನರು ಹಸಿವಿನಿಂದ ಸಾಯಲು ಶುರುವಾಗಿದ್ದಾರೆ.. ಏಕೆಂದರೆ... ಹೊಲದಲ್ಲಿ ಕಾಯಿ ಪಲ್ಯೆ ಬೆಳೆ ಬೆಳೆಯುತ್ತಿಲ್ಲ...!! ಎಲ್ಲ ಕಿರಾಣಿಯ ಅಂಗಡಿಗಳು ಬಂದ್ ಆಗಿದ್ದವು .. ಹೋಟೆಲ್ ಗಳು-ಡಾಬಗಳು ಸಹ ಬಂದ್ ಆಗಿ ಹೋಗಿದೆ . ಜನರು ಖಾಯಿಲೆಯಿಂದ ಸಾಯುತ್ತಿದ್ದಾರೆ.. ಡಾಕ್ಟರ್ ಗಳು ಸಹ ಇಲ್ಲ.. ಪಶುಗಳು ಹಸಿವಿನಿಂದ ಸಾಯುತ್ತಿವೆ.. ಹೊಲದಿಂದ ಮೇವು ಸಿಗುತ್ತಿಲ್ಲ.. ಮಕ್ಕಳ್ಳೆಲ್ಲರೂ ಹಸಿವಿನಿಂದ ಆಳುತ್ತಿದ್ದಾರೆ.. ಏಕೆಂದರೆ, ಹಸುಗಳು ಹಾಲು ಕೊಡುತ್ತಿಲ್ಲ.. ಜನರು ರಸ್ತೆಗಳ ಮೇಲೆ ಅಲೆಯುತ್ತಿದ್ದಾರೆ.. ಒಂದೊಂದು ಲಕ್ಷ ರೂಪಾಯಿ ಕೈಯಲ್ಲಿ ಹಿಡಿದುಕೊಂಡು..!!!!! ಅಣ್ಣ 50 ಅಲ್ಲ 100 ರೂ. ಕೊಡುತ್ತೇನೆ.. 100 ಗ್ರಾಂ ಹಾಲು ಕೊಟ್ಟು ಬಿಡಿ. ಕಳೆದ ಎರಡೂ ದಿನಗಳಿಂದ ಮಕ್ಕಳು ಹಸಿವಿನಿಂದ ಸಾಯುತ್ತಿದ್ದಾರೆ... ಅಂತ ಗೋಳಾಡುತ್ತಿದ್ದಾರೆ. ಆದರೂ ಯಾರೂ ಕೂಡ ಹಾಲು ಕೊಡುತ್ತಿಲ್ಲ. 50 ಲಕ್ಷ ಇರುವಾಗ 100 ರೂ ಕಣ್ಣಿಗೆ ಹಿಡಿಸುತ್ತದೆಯೇ.... ಮತ್ತೆ 10 ದಿನಗಳ ನಂತರ.... ಜನ ಸಾಲು ಸಾಲಾಗಿ ಸಾಯುತ್ತಾ ಹೋದರು. ಸ್ವಲ್ಪ ಬದುಕುಳಿದ ಜನರು ರಸ್ತೆಗಳ ಮೇಲೆ ಹಣವಿರುವ ಬ್ಯಾಗ್ ತೆಗೆದುಕೊಂಡು ಅಲೆಯುತ್ತಿದ್ದಾರೆ. "ಅಣ್ಣ 5ಲಕ್ಷ ರುಪಾಯಿ ತೆಗೆದುಕೊಳ್ಳಿ.. ನಮಗೆ 5 ಕಿಲೋ ಅಕ್ಕಿಯನ್ನು ಕೊಟ್ಟು ಬಿಡಿ ಸಾಕು!!!! 10 ದಿನಗಳಿಂದ ಉಪವಾಸವಿದ್ದೇವೆ....'' ಅಂತ ಅಂಗಲಾಚುತ್ತಿದ್ದಾರೆ. ಎಲ್ಲಾ ಮಾರುಕಟ್ಟೆಗಳು ಬಂದ್ ಆಗಿ ಬಿಟ್ಟಿದೆ. ಆಹಾರ ಪದಾರ್ಥಗಳು ಯಾರ ಬಳಿಯು ಇಲ್ಲವಾಗಿದೆ. ಎಲ್ಲೆಡೆಯೂ ಜನರ ಹೆಣಗಳು ಕಾಣಿಸುತ್ತಿದೆ!! ಮತ್ತೆ ನಾನು ಸಹ ನನ್ನ "50ಲಕ್ಷ " ರೂಪಾಯಿ ತೆಗೆದುಕೊಂಡು ಓಡಿ ಹೋಗುತ್ತಿದ್ದೇನೆ.. ತೆಗೆದುಕೊಳ್ಳಿ ಅಣ್ಣ ತಗೋಳಿ ಇದು "50ಲಕ್ಷ " ಒಂದೇ ಒಂದು ತುಂಡು ರೊಟ್ಟಿ ಕೊಟ್ಟು ಬಿಡಿ ಸಾಕು ..!!!!!!'' ಅಂತ ಕೇಳಿಕೊಳ್ಳುತ್ತಾ ಇದ್ದೀನಿ. ಅಷ್ಟರಲ್ಲಿ ಅಮ್ಮನ ಧ್ವನಿ ಬಂತು... "ಎದ್ದೇಳೋ.." ಅಂತ. ಎದ್ದಾಗ.. ಕಂಡಿದ್ದು ಕೆಟ್ಟ ಕನಸು ಅಂತ ತಿಳಿದು ಒಂದು ಕ್ಷಣ ನಿಟ್ಟುಸಿರು ಬಿಟ್ಟೆ. ಅಮ್ಮ ಕೊಟ್ಟ ಕಾಫಿ ಕುಡಿಯುತ್ತಾ ಯೋಚಿಸಿದೆ. ಸುಖಾ ಸುಮ್ಮನೆ ಹಣ ಬರೋದು ಅಚ್ಚೇದಿನ್ ಅಲ್ಲ. ದುಡಿದು ತಿನ್ನವುದೇ ನಿಜವಾದ ಅಚ್ಚೇದಿನ್ ಅಂತ. ಎದ್ದು ಸ್ನಾನ ಮುಗಿಸಿ ಕೆಲಸಕ್ಕೆ ರೆಡಿ ಆಗಿ ಆಚೆ ಬಂದು ನೋಡಿದೆ. ಆಹಾರ ಪದಾರ್ಥಗಳಂತು ಇದೆ. ನೀರಿದೆ. ಮಕ್ಕಳ್ಳೆಲ್ಲರೂ ಆಟವಾಡುತ್ತಿರುವರು, ಪಶುಗಳು ಹೊಲದಲ್ಲಿ ಮೇಯುತ್ತಿವೆ, ಅಂಗಡಿಯಲ್ಲಿ ಜನರ ಗುಂಪು ಇದೆ, ಜನರು ಹೋಗಿ ಬರುತ್ತಿರುವರು. ಇದೆಲ್ಲವನ್ನು ನೋಡಿ, ಖುಷಿಯಾಗಿ ನನ್ನ ಕೆಲಸದ ಕಡೆ ಹೊರಟೆ... ಈಗ ಇದನ್ನು ಓದಿ, ಮುಂದೆ ಹೇಗೆ ಇರಬೇಕು ಅನ್ನೋದು ನಿಮ್ಮ ಊಹೆಗೆ ಬಿಟ್ಟದ್ದು. ಯೋಚಿಸಿ ನೋಡಿ. ನಿಮ್ಮ ಅಭಿಪ್ರಾಯಗಳನ್ನು ತಪ್ಪದೆ ನಮಗೆ ತಿಳಿಸಿ..Vinuthana – Inspirational Stories in Kannada; Moral Stories in Kannada; Inspirational Quotes in Kannada; Funny Quotes in Kannada; News in Kannada; Stories in Kannada; Karnataka History in Kannada; Movie News in Kannada, Sports News in Kannada; Life Coach in Kannada; Relationship Stories in Kannada; Life Stories in Kannada; Bangalore Stories in Kannada; Karnataka Culture in Kannada Language; World News in Kannada; Website for Kannada; Online Kannada Portal for all News; Online Kannada Stories; ಓಡಿ, ನಿಮ್ಮ , ಆಗತ್ತೆ, ಅಂದ್ರೆ, ಕಡಿಮೆ, ಕನ್ನಡ, ನಮ್ಮ, ನಾವು, ನಿಮ್ಮ, ಮಗು, ಮೇಲೆ, ಶಕ್ತಿ, ಹಾಗೆ, ಹೆಚ್ಚು,
Read More